Widgets Magazine

ಇಮ್ರಾನ್ ಖಾನ್ ಪಾಕ್ ಸೇನೆಯ ಕೈಗೊಂಬೆ ಎಂದ ಕ್ರಿಕೆಟಿಗ ಮೊಹಮ್ಮದ್ ಕೈಫ್

ನವದೆಹಲಿ| Krishnaveni K| Last Modified ಸೋಮವಾರ, 7 ಅಕ್ಟೋಬರ್ 2019 (09:07 IST)
ನವದೆಹಲಿ: ಪಾಕಿಸ್ತಾನದ ಹಾಲಿ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಮೇಲೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಟೀಕಾ ಪ್ರಹಾರ ನಡೆಸಿದ್ದಾರೆ.

 
ಇತ್ತೀಚೆಗೆ ವಿಶ್ವಸಂಸ್ಥೆ ಅಧಿವೇಶನದಲ್ಲಿ ಇಮ್ರಾನ್ ಮಾಡಿದ್ದ ಭಾಷಣವನ್ನು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಸೇರಿದಂತೆ ಭಾರತದ ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ. ಇದೀಗ ಆ ಸಾಲಿಗೆ ಮೊಹಮ್ಮದ್ ಕೈಫ್ ಕೂಡಾ ಸೇರ್ಪಡೆಯಾಗಿದ್ದಾರೆ.
 
‘ಪಾಕಿಸ್ತಾನ ಉಗ್ರರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲೇಬೇಕು. ನಿಮ್ಮ ದೇಶ ಉಗ್ರರಿಗೆ ಸುರಕ್ಷಿತ ತಾಣವಾಗಿದೆ. ಮೊದಲು ಇವರ ವಿರುದ್ಧ ಕ್ರಮ ಕೈಗೊಳ್ಳಿ. ವಿಶ್ವಸಂಸ್ಥೆಯಲ್ಲಿ ಎಂತಹಾ ದುರಾದೃಷ್ಟಕರ ಭಾಷಣ ಮಾಡಿದ್ದೀರಿ. ನೀವು ಶ್ರೇಷ್ಠ ಕ್ರಿಕೆಟಿಗನಾಗಿದ್ದವರು ಇಂದು ಪಾಕ್ ಸೇನೆಯ ಕೈಗೊಂಬೆಯಾಗಿದ್ದೀರಿ’ ಎಂದು ಇಮ್ರಾನ್ ವಿರುದ್ಧ ಕೈಫ್ ಟ್ವಿಟರ್ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :