ಕೋಲ್ಕೊತ್ತಾ: ಟೀಂ ಇಂಡಿಯಾ ಕ್ರಿಕೆಟಿಗ, ಪತಿ ಮೊಹಮ್ಮದ್ ಶಮಿ ವಿರುದ್ಧ ಗೃಹ ಹಿಂಸೆ ಪ್ರಕರಣ ದಾಖಲಿಸಿರುವ ಹಸೀನ್ ಜಹಾನ್ ಇದರ ನಡುವೆ ಅವಾಂತರ ಮಾಡಿಕೊಂಡಿದ್ದಾರೆ.ಪತಿಯ ಜತೆಗೆ ಬಿರುಕಿನ ಹಿನ್ನಲೆಯಲ್ಲಿ ಖಾಸಗಿ ವಾಹಿನಿಯ ಪತ್ರಕರ್ತರೊಬ್ಬರು ವೈಯಕ್ತಿಕ ಪ್ರಶ್ನೆ ಕೇಳಿದ್ದಕ್ಕೆ ಹಸೀನ್ ಉತ್ತರಿಸದೇ ಮುನ್ನಡೆದರು. ಆದರೂ ಬಿಡದೇ ಹಿಂಬಾಲಿಸಿದ ಪತ್ರಕರ್ತನ ಮೇಲೆ ಸಿಟ್ಟಿಗೆದ್ದ ಹಸೀನ್ ಕ್ಯಾಮರಾಗೆ ಹಾನಿ ಮಾಡಿದ್ದಲ್ಲದೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಇದಾದ ಬಳಿಕ ಆಕೆ ತಮ್ಮ ಕಾರು ಹತ್ತಿ ಅಲ್ಲಿಂದ ತೆರಳಿದರು