ಯುವತಿಗೆ ಮೆಸೇಜ್ ಮಾಡಿ ಸಿಕ್ಕಿಬಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ

ನವದೆಹಲಿ| Krishnaveni K| Last Modified ಗುರುವಾರ, 11 ಜುಲೈ 2019 (08:48 IST)
ನವದೆಹಲಿ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಸುತ್ತ ವಿವಾದದ ಹುತ್ತ ಕರಗುವುದೇ ಇಲ್ಲ ಎನಿಸುತ್ತದೆ. ಪತ್ನಿಗೆ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಶಮಿ ಹಿಂದೊಮ್ಮೆ ವಿವಾದಕ್ಕೆ ಗುರಿಯಾಗಿದ್ದರು.

 
ಆ ಪ್ರಕರಣದಲ್ಲಿ ಬಿಸಿಸಿಐ ತನಿಖಾ ಸಮಿತಿ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಇದೀಗ ಯುವತಿಯೊಬ್ಬಳಿಗೆ ಮೊಹಮ್ಮದ್ ಶಮಿ ಅಧಿಕೃತ ಟ್ವಿಟರ್ ಖಾತೆಯಿಂದ ಹಲವು ಬಾರಿ ಸಂದೇಶ ಹೋಗಿರುವುದನ್ನು ಆಕೆಯೇ ಬಹಿರಂಗಪಡಿಸಿದ್ದಾಳೆ.
 
ಟ್ವಿಟರ್ ನಲ್ಲಿ ಮೊಹಮ್ಮದ್ ಶಮಿ ಹೆಸರು ಹೇಳದೇ ಅವರ ಟ್ವಿಟರ್ ಖಾತೆಯ ಸ್ಕ್ರೀನ್ ಶಾಟ್ ಜತೆಗೆ ಶಮಿ ಕಳುಹಿಸಿರುವ ಸಂದೇಶವನ್ನೂ ಪ್ರಕಟಿಸಿರುವ ಸೋಫಿಯಾ ಎಂಬ ಯುವತಿ ಲಕ್ಷಾಂತರ ಮಂದಿ ಹಿಂಬಾಲಕರನ್ನು ಹೊಂದಿರುವ ಕ್ರಿಕೆಟಿಗ ಹೀಗೆ ನನಗೆ ಪದೇ ಪದೇ ಏಕೆ ಮೆಸೇಜ್ ಕಳುಹಿಸುತ್ತಿದ್ದಾರೆ ಗೊತ್ತಿಲ್ಲ ಎಂದು ಆರೋಪಿಸಿದ್ದಾಳೆ. ಆದರೆ ಇದು ನಿಜವಾಗಿಯೂ ಶಮಿಯೇ ಕಳುಹಿಸಿದ್ದಾ ಎಂದು ಸ್ಪಷ್ಟವಾಗಿಲ್ಲ.
ಇದರಲ್ಲಿ ಇನ್ನಷ್ಟು ಓದಿ :