Widgets Magazine

ಪತ್ನಿಯ ಉಡುಪಿನಿಂದ ಇಕ್ಕಟ್ಟಿಗೆ ಸಿಲುಕಿದ ಮೊಹಮ್ಮದ್ ಶಮಿ

NewDelhi| Krishnaveni K| Last Modified ಸೋಮವಾರ, 26 ಡಿಸೆಂಬರ್ 2016 (09:02 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಈಗ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾರಣ, ಅವರ ಪತ್ನಿ ಹಸೀನ್ ಜಹಾನ್ ಅವರ ಸ್ಟೈಲಿಶ್ ಉಡುಪು.

 
ಶಮಿ ಮುಸ್ಲಿಂ ಧರ್ಮಕ್ಕೆ ಸೇರಿದವರು. ಮುಸ್ಲಿಂ ಹೆಣ್ಣು ಮಕ್ಕಳು ಮೈ ತುಂಬಾ ಬಟ್ಟೆ ತೊಡಬೇಕು. ಸಾರ್ವಜನಿಕವಾಗಿ ಅರೆಬರೆ ಬಟ್ಟೆ ತೊಟ್ಟು ತೋರಿಸಿಕೊಳ್ಳಬಾರದು ಎಂದು ಸಂಪ್ರದಾಯವಾದಿಗಳ ವಾದ.
 
ಆದರೆ ಶಮಿ ತಮ್ಮ ಪತ್ನಿಯ ಜತೆಗೆ ತೆಗೆಸಿಕೊಂಡ ಫೋಟೋವೊಂದನ್ನು ಫೇಸ್ ಬುಕ್ ಪೇಜ್ ನಲ್ಲಿ ಹಾಕಿಕೊಂಡಿದ್ದರು. ಇದರಲ್ಲಿ ಶಮಿ ಪತ್ನಿ ಬುರ್ಖಾ ಧರಿಸಿಲ್ಲ. ಸ್ಟೈಲಿಶ್ ಉಡುಪೊಂದನ್ನು ಧರಿಸಿ ಪತಿ ಜತೆ ಕುಳಿತುಕೊಂಡಿದ್ದಾರೆ. ಇದೀಗ ಕಟ್ಟಾ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
 
ಆದರೆ ಇನ್ನೊಬ್ಬ ಕ್ರಿಕೆಟರ್ ಮೊಹಮ್ಮದ್ ಕೈಫ್ ಇಂತಹ ಕಾಮೆಂಟ್ ಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ದೇಶದಲ್ಲಿ ಮಾಡಲು ಬೇರೆ ಬೇಕಾದಷ್ಟು ವಿಷಯಗಳಿವೆ. ಅದನ್ನು ಬಿಟ್ಟು ಇದನ್ನು ದೊಡ್ಡದು ಮಾಡಬೇಡಿ. ಶಮಿಗೆ ಸಂಪೂರ್ಣ ಬೆಂಬಲವಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಂತೂ ಪತ್ನಿ ದೆಸೆಯಿಂದ ಶಮಿ ವಿವಾದಕ್ಕೆ ಕಾರಣವಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :