ನವದೆಹಲಿ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮೇಲೆ ಆರೋಪವೊಂದು ಕೇಳಿಬಂದಿದ್ದು ಇದಕ್ಕೆ ಸ್ವತಃ ಶಮಿ ಉತ್ತರ ಕೊಟ್ಟಿದ್ದಾರೆ.ಶಮಿ ಬೇರೆ ಹೆಣ್ಣಿನ ಜತೆ ಸಂಬಂಧವಿಟ್ಟುಕೊಂಡಿರುವುದಲ್ಲದೆ ಪತ್ನಿ ಹಸೀನ್ ಜಹಾನ್ ಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ವೇಗಿ ಶಮಿ ಇದೆಲ್ಲಾ ಯಾರೋ ಬೇಕಂತಲೇ ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳು. ನನ್ನ ಹೆಸರು ಹಾಳು ಮಾಡುವ ಕುತಂತ್ರವಷ್ಟೇ ಎಂದು ಶಮಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.ಶಮಿ