ಬ್ರಿಸ್ಬೇನ್ ನಲ್ಲೂ ಮೊಹಮ್ಮದ್ ಸಿರಾಜ್ ವಿರುದ್ಧ ಅವಾಚ್ಯ ನಿಂದನೆ

ಬ್ರಿಸ್ಬೇನ್| Krishnaveni K| Last Modified ಶುಕ್ರವಾರ, 15 ಜನವರಿ 2021 (17:06 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ವಿರುದ್ಧ ಪ್ರೇಕ್ಷಕರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

 
ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸಮರ್ಥಕರು ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾರನ್ನು ಜನಾಂಗೀಯವಾಗಿ ನಿಂದಿಸಿದ್ದರು. ಇಲ್ಲಿಯೂ ಅದು ಮುಂದುವರಿದಿದೆ. ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಸಿರಾಜ್ ಗೆ ‘ನಮ್ಮ ಕಡೆ ಕೈ ಬೀಸು’ ಎನ್ನುತ್ತಿದ್ದ ಕೆಲವು ಪ್ರೇಕ್ಷಕರ ಗುಂಪು ಬಳಿಕ ಅವಾಚ್ಯ ಶಬ್ಧಗಳಿಂದ ಸಿರಾಜ್ ರನ್ನು ಕರೆಯುತ್ತಿರುವ ವಿಡಿಯೋವೊಂದು ಹರಿದಾಡಿದೆ. ಆದರೆ ಸಿರಾಜ್ ಗೆ ಈ ನಿಂದನೆ ಸ್ಪಷ್ಟವಾಗಿ ಕೇಳಿಲ್ಲ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :