ಬಿಎಂಡಬ್ಲ್ಯು ಕಾರು ಖರೀದಿಸಿದ ಮೊಹಮ್ಮದ್ ಸಿರಾಜ್

ಮುಂಬೈ| Krishnaveni K| Last Modified ಶನಿವಾರ, 23 ಜನವರಿ 2021 (09:46 IST)
ಮುಂಬೈ: ಆಸ್ಟ್ರೇಲಿಯಾದ ಯಶಸ್ವೀ ಪ್ರವಾಸ ಮುಗಿಸಿ ತವರಿಗೆ ಮರಳಿದೊಡನೆ ಟೀಂ ಇಂಡಿಯಾ ಯುವ ವೇಗಿ ಮೊಹಮ್ಮದ್ ಸಿರಾಜ್ ಹೊಸ ಬಿಎಂಡಬ್ಲ್ಯು ಕಾರು ಖರೀದಿ ಮಾಡಿದ್ದಾರೆ.

 

ಆಸ್ಟ್ರೇಲಿಯಾ ಸರಣಿಯಲ್ಲಿ ಅವರ ಪ್ರದರ್ಶನದಿಂದಾಗಿ ಟೀಂ ಇಂಡಿಯಾದಲ್ಲಿ ಅವರಿಗೆ ಖಾಯಂ ಸ್ಥಾನ ಗ್ಯಾರಂಟಿ ಎಂದಾಗಿದೆ. ಇದೇ ಖುಷಿಯಲ್ಲಿ ಈಗ ಅವರು ಕಾರು ಖರೀದಿ ಮಾಡಿದ್ದು, ದೇವರ ದಯೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತೀರಾ ಬಡತನದಿಂದ ಬೆಳೆದು ಬಂದಿದ್ದ ಸಿರಾಜ್ ಇಂದು ದುಬಾರಿ ಕಾರಿಗೆ ಒಡೆಯರಾಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :