ಮುಂಬೈ: ಮದುವೆಯಾಗಿ ಎರಡು ವಾರ ಕಳೆಯುವಷ್ಟರಲ್ಲಿ ಜಸ್ಪ್ರೀತ್ ಬುಮ್ರಾ ಈಗ ಕ್ವಾರಂಟೈನ್ ಗೆ ಮರಳಿದ್ದಾರೆ. ಐಪಿಎಲ್ ಗಾಗಿ ಬುಮ್ರಾ ಕ್ವಾರಂಟೈನ್ ಅವಧಿ ಪೂರೈಸಲಿದ್ದಾರೆ.ಸಂಜನಾ ಗಣೇಶ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬುಮ್ರಾ ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್ ಗಳ ಸರಣಿಯಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಏಪ್ರಿಲ್ 9 ರಿಂದ ಆರಂಭವಾಗಲಿರುವ ಐಪಿಎಲ್ ನಲ್ಲಿ ಭಾಗಿಯಾಗಲು ಮುಂಬೈ ಇಂಡಿಯನ್ಸ್ ತಂಡವನ್ನು ಕೂಡಿಕೊಂಡಿದ್ದಾರೆ.ಸದ್ಯಕ್ಕೆ ನಿಯಮದಂತೆ ಕ್ವಾರಂಟೈನ್ ಅವಧಿಯಲ್ಲಿ ಕಳೆಯಲಿರುವ ಬುಮ್ರಾ ಬಳಿಕ ಅಭ್ಯಾಸಕ್ಕೆ ಮರಳಲಿದ್ದಾರೆ.