ಮುಂಬೈ ಇಂಡಿಯನ್ಸ್ ಕೋಚ್ ಕಿರಣ್ ಮೋರೆಗೆ ಕೊರೋನಾ

ಮುಂಬೈ| Krishnaveni K| Last Modified ಬುಧವಾರ, 7 ಏಪ್ರಿಲ್ 2021 (08:38 IST)
ಮುಂಬೈ: ಮುಂಬೈ ಇಂಡಿಯನ್ಸ್ ಕೋಚ್ ಕಿರಣ್ ಮೋರೆಗೆ ಕೊರೋನಾ ಪಾಸಿಟಿವ್ ವರದಿಯಾಗಿದೆ. ಇದರೊಂದಿಗೆ ಕೂಟದಲ್ಲಿ ಪಾಲ್ಗೊಳ್ಳಲಿರುವ ಮತ್ತೊಬ್ಬ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದಂತಾಗಿದೆ.

 

‘ಮೋರೆ ಈಗ ಐಸೋಲೇಟ್ ಆಗಿದ್ದು, ಕ್ವಾರಂಟೈನ್ ಗೊಳಗಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಬಿಸಿಸಿಐನ ಎಲ್ಲಾ ಆರೋಗ್ಯ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಮೋರೆಯವರನ್ನು ಸದ್ಯಕ್ಕೆ ಮುಂಬೈ ಇಂಡಿಯನ್ಸ್ ವೈದ್ಯರು ನಿಗಾ ವಹಿಸಿದ್ದಾರೆ’ ಎಂದು ಮುಂಬೈ ಇಂಡಿಯನ್ಸ್ ಪ್ರಕಟಣೆ ತಿಳಿಸಿದೆ.
 
ಸದ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ ಚೆನ್ನೈನಲ್ಲಿ ಬೀಡುಬಿಟ್ಟಿದೆ. ಇಲ್ಲಿ ಈಗಾಗಲೇ ಕೆಲವು ಕ್ರಿಕೆಟಿಗರು ಕೊರೋನಾ ಪಾಸಿಟಿವ್ ಆಗಿದ್ದಾರೆ. ಮುಂಬೈ ಕ್ರೀಡಾಂಗಣದ ಸಿಬ್ಬಂದಿಗೂ ಕೊರೋನಾ ಸೋಂಕು ತಗುಲಿದೆ. ಹೀಗಾಗಿ ಐಪಿಎಲ್ ಈ ಬಾರಿ ಕೊರೋನಾ ಆತಂಕದಲ್ಲೇ ನಡೆಯಲಿದೆ.
ಇದರಲ್ಲಿ ಇನ್ನಷ್ಟು ಓದಿ :