ಮುಂಬೈ: ಇನ್ನೇನು ಐಪಿಎಲ್ ಕ್ರಿಕೆಟಗೂ ಕೆಲವೇ ದಿನಗಳು ಬಾಕಿಯಿವೆ. ಆದರೆ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿ ನಿಷೇದಕ್ಕೊಳಗಾಗಿರುವ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಐಪಿಎಲ್ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ.ಬಿಸಿಸಿಐ ಆದಷ್ಟು ಬೇಗ ವಿಚಾರಣೆ ಮುಗಿಸಿ ಕ್ರಿಕೆಟಿಗರ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ, ಈ ಇಬ್ಬರ ಐಪಿಎಲ್ ಭವಿಷ್ಯವೂ ಮಂಕಾಗಲಿದೆ. ಹೀಗಾಗಿ ಹಾರ್ದಿಕ್ ಪ್ರತಿನಿಧಿಸುವ ಮುಂಬೈ ಇಂಡಿಯನ್ಸ್ ತಂಡ ಬೇಗನೇ ವಿಚಾರಣೆ ಪೂರ್ಣಗೊಳಿಸುವಂತೆ ಬಿಸಿಸಿಐ ಮೇಲೆ ಒತ್ತಡ ಹಾಕಿತ್ತು