ಮುಂಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ಎಂಎಸ್ ಧೋನಿ ಎದುರಾಳಿ ಬ್ಯಾಟ್ಸ್ ಮನ್ ಗೆ ಚಳ್ಳೆ ಹಣ್ಣು ತಿನ್ನಿಸಲು ಮಾಡುವ ಕೆಲಸವೊಂದು ಅವರಿಗೇ ಮುಳುವಾಗುವ ಸಾಧ್ಯತೆಯಿದೆ. ಐಸಿಸಿ ಹೊಸ ನಿಯಮದ ಪ್ರಕಾರ, ಫೀಲ್ಡರ್ ಎದುರಾಳಿ ಬ್ಯಾಟ್ಸ್ ಮನ್ ಗೆ ಚಳ್ಳೇಹಣ್ಣು ತಿನ್ನಿಸಲು ಬಾಲ್ ಕೈಯಲ್ಲಿದ್ದು ಫೀಲ್ಡಿಂಗ್ ಮಾಡಿದಂತೆ ನಾಟಕವಾಡುವಂತಿಲ್ಲ. ಹೀಗೆ ಮಾಡಿದರೆ ಎದುರಾಳಿ ತಂಡಕ್ಕೆ ಐದು ಪೆನಾಲ್ಟಿ ರನ್ ಸಿಗಲಿದೆ. ಹೀಗೇ ಮಾಡಿ ಆಸ್ಟ್ರೇಲಿಯಾ ದೇಶೀಯ ಟೂರ್ನಿಯೊಂದರಲ್ಲಿ ತಂಡವೊಂದು