ಸಚಿನ್ ತೆಂಡುಲ್ಕರ್ ನ ಈ ದಾಖಲೆ ಮಾತ್ರ ಯಾರಿಂದಲೂ ಮುರಿಯಕ್ಕಾಗಲ್ವಂತೆ!

ಮುಂಬೈ, ಶುಕ್ರವಾರ, 23 ಆಗಸ್ಟ್ 2019 (09:52 IST)

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇರಲಿ, ವಿಶ್ವದ ಯಾವುದೇ ಬ್ಯಾಟ್ಸ್ ಮನ್ ಇರಲಿ, ಸಚಿನ್ ತೆಂಡುಲ್ಕರ್ ಮಾಡಿದ ಯಾವುದೇ ವಿಶ್ವ ದಾಖಲೆ ಮುರಿಯಬಹುದು. ಆದರೆ ಈ ಒಂದು ದಾಖಲೆ ಮಾತ್ರ ಯಾರಿಂದಲೂ ಮುರಿಯಕ್ಕಾಗಲ್ಲ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿಕೊಂಡಿದ್ದಾರೆ.


 
ಕೊಹ್ಲಿ ಹಲವು ತೆಂಡುಲ್ಕರ್ ದಾಖಲೆಗಳನ್ನು ಮುರಿದಿದ್ದಾರೆ. ಇನ್ನೇನು ಅವರ ಶತಕಗಳ ದಾಖಲೆಯನ್ನೂ ಮುರಿಯುವ ಹಂತದಲ್ಲಿದ್ದಾರೆ. ಆದರೆ ಯಾರೇ ಆಗಲಿ, ಸಚಿನ್ ಮಾಡಿದ ಈ ಒಂದು ದಾಖಲೆ ಮುರಿಯುವುದು ಅಸಾಧ‍್ಯ ಅನಿಸುತ್ತದೆ ಎಂದು ಸೆಹ್ವಾಗ್ ಹೆಳಿದ್ದಾರೆ.
 
‘ಯಾವುದೇ ಬ್ಯಾಟ್ಸ್ ಮನ್ ಸಚಿನ್ ನ ಎಲ್ಲಾ ದಾಖಲೆ ಮುರಿಯಬಹುದು. ಆದರೆ ಗರಿಷ್ಠ 200 ಟೆಸ್ಟ್ ಆಡಿದ ದಾಖಲೆ ಮಾತ್ರ ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ನನ್ನ ಭಾವನೆ’ ಎಂದು ಸೆಹ್ವಾಗ್ ಹೇಳಿದ್ದಾರೆ. ಕೊಹ್ಲಿ ಕೂಡಾ ಸದ್ಯಕ್ಕೆ 77 ಟೆಸ್ಟ್ ಆಡಿದ್ದಾರಷ್ಟೆ. ಇತ್ತೀಚೆಗೆ ಟೆಸ್ಟ್ ಪಂದ್ಯಗಳು ಕಡಿಮೆ. ಬಹುಶಃ ಇದೇ ಕಾರಣಕ್ಕೆ ಸೆಹ್ವಾಗ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ದಿಡೀರ್ ಕುಸಿತ ಬಳಿಕ ಚೇತರಿಕೆ

ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟದಲ್ಲಿ ಮೊದಲು ಬ್ಯಾಟಿಂಗ್ ...

news

ರೆಹಾನೆಯೋ? ರೋಹಿತ್ ಶರ್ಮಾನೋ? ವಿರಾಟ್ ಕೊಹ್ಲಿಗೆ ಎದುರಾಗಿದೆ ಉಭಯ ಸಂಕಟ

ಆಂಟಿಗುವಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಟೀಂ ಇಂಡಿಯಾ ...

news

ಟೀಂ ಇಂಡಿಯಾ ಆಯ್ಕೆಗಾರನ ಸ್ಥಾನಕ್ಕೆ ಅನಿಲ್ ಕುಂಬ್ಳೆ ಬರಬೇಕು ಎಂದವರು ಯಾರು ಗೊತ್ತೇ?!

ಮುಂಬೈ: ಟೀಂ ಇಂಡಿಯಾದ ನಾಯಕನಾಗಿ ಟೆಸ್ಟ್ ಕ್ರಿಕೆಟ್ ತಂಡವನ್ನು ಯಶಸ್ಸಿನತ್ತ ಕೊಂಡೊಯ್ದ ಸ್ಪಿನ್ ಗಾರುಡಿಗ ...

news

ಟೆಸ್ಟ್ ಚಾಂಪಿಯನ್ ಶಿಪ್ ಗೆ ಟೀಂ ಇಂಡಿಯಾಗೆ ಹೊಸ ಜೆರ್ಸಿ

ಆಂಟಿಗುವಾ: ಟೆಸ್ಟ್ ಕ್ರಿಕೆಟ್ ಎಂದರೆ ಎಲ್ಲಾ ರಾಷ್ಟ್ರದ ಆಟಗಾರರಿಗೂ ಒಂದೇ ಥರದ ಬಿಳಿ ಜೆರ್ಸಿ. ಇದು ಹಲವು ...