ಮುಂಬೈ: ಧೋನಿ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಕುಚುಕು ಗೆಳಯರು. ಈ ಮಾಜಿ-ಹಾಲಿ ನಾಯಕರ ಮಧ್ಯೆ ವಿರಸವಿದೆಯೇ ಎಂದು ಗಾಸಿಪ್ ಪ್ರಿಯರು ಹುಡುಕುತ್ತಿರುತ್ತಾರೆ. ಆದರೆ ಸ್ವತಃ ವಿರಾಟ್ ಕೊಹ್ಲಿ ಅಂತಹವರಿಗೆ ತಕ್ಕ ಏಟು ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ನಡುವೆ ಹುಳಿ ಹಿಂಡಲಾಗದು. ಅಂತಹ ಯಾವುದೇ ಕಸರತ್ತುಗಳೂ ನಮ್ಮ ಸಂಬಂಧವನ್ನು ಹಾಳು ಮಾಡದು ಎಂದು ಕೊಹ್ಲಿ ಹೇಳಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡಿರುವ ಕೊಹ್ಲಿ ನಾವು ಅಂತಹ ಸುದ್ದಿಗಳನ್ನು ಓದುವುದೂ ಇಲ್ಲ.