ಮುಂಬೈ: ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಕೂಟ ಮುಗಿದ ಬೆನ್ನಲ್ಲೇ ಎಲ್ಲರೂ ತಮ್ಮ ಮೆಚ್ಚಿನ ವಿಶ್ವ ಇಲೆವೆನ್ ತಂಡ ಪ್ರಕಟಿಸಲು ಆರಂಭಿಸಿದ್ದಾರೆ. ಇದೀಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ತಮ್ಮ ಕನಸಿನ ವಿಶ್ವ ಇಲೆವೆನ್ ತಂಡ ಪ್ರಕಟಿಸಿದ್ದು, ಅದರಲ್ಲಿ ಧೋನಿಗೆ ಸ್ಥಾನವೇ ನೀಡಿಲ್ಲ.ಸಚಿನ್ ಕನಸಿನ ತಂಡದಲ್ಲಿ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಮತ್ತು ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಧೋನಿಗೆ ಸ್ಥಾನ ನೀಡಿಲ್ಲ.