ಕೋಲ್ಕೊತ್ತಾ: ಕುಲದೀಪ್ ಯಾದವ್ ಎಂಬ ಚಿನಾಮನ್ ಬೌಲರ್ ನನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪರಿಚಯಿಸಿದ್ದು ಅಂದು ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ. ಇದೇ ಕಾರಣಕ್ಕೆ ಕುಂಬ್ಳೆ ಮತ್ತು ಕೊಹ್ಲಿ ನಡುವೆ ಅಸಮಾಧಾನ ಹೊಗೆಯಾಡಿತ್ತು ಎಂದು ವರದಿಯಾಗಿತ್ತು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಗಾಯಗೊಂಡು ಹೊರಗುಳಿದಿದ್ದಾಗ, ಕೋಚ್ ಕುಂಬ್ಳೆ ಕುಲದೀಪ್ ಯಾದವ್ ರಲ್ಲಿದ್ದ ಪ್ರತಿಭೆ ಗಮನಿಸಿ ಕಣಕ್ಕಿಳಿಸಲು ನಿರ್ಧರಿಸಿದ್ದರು. ಇದು ಕೊಹ್ಲಿಯ ಗಮನಕ್ಕೆ ಬಂದಿರಲಿಲ್ಲ