ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋತಿರಬಹುದು. ಆದರೆ ಇದು ನಮಗೆ ಒಳ್ಳೆಯದೇ ಆಯಿತು. ಮುಂದೆ ಎಚ್ಚೆತ್ತುಕೊಳ್ಳಲು ಅವಕಾಶ ಸಿಕ್ಕಿದಂತಾಗಿದೆ ಎಂದು ಪಾಕ್ ಕ್ರಿಕೆಟ್ ತಂಡದ ನಾಯಕ ಸರ್ಫ್ರಾಜ್ ಅಹ್ಮದ್ ಹೇಳಿದ್ದಾರೆ.ಆ ಮೂಲಕ ಲೀಗ್ ಪಂದ್ಯದಲ್ಲಿ ಸೋತರೂ ಮಹತ್ವದ ಪಂದ್ಯದಲ್ಲಿ ಭಾರತ ಎದುರಾದರೆ ಪೈಪೋಟಿ ನೀಡುವ ಎಚ್ಚರಿಕೆ ನೀಡಿದ್ದಾರೆ. ಈ ಸೋಲಿನಿಂದ ನಮ್ಮ ಸಾಮರ್ಥ್ಯ ಅಳೆಯಲಾಗದು. ಮುಂದಿನ ಪಂದ್ಯಗಳಲ್ಲಿ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್