ಕರಾಚಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಕಿ ಅರ್ಥರ್ ಸವಾಲೆಸೆದಿದ್ದಾರೆ. ಕೊಹ್ಲಿ ದ.ಆಫ್ರಿಕಾದಲ್ಲೂ ಶತಕ ಸಿಡಿಸಿದ್ದಾರೆ. ನಮ್ಮ ಆಟಗಾರರಿಗೆ ಅಲ್ಲಿ ರನ್ ಗಳಿಸಲೂ ಕಷ್ಟ. ಹಾಗಿರುವಾಗ ಕೊಹ್ಲಿ ಎಲ್ಲಾ ತಂಡಗಳ ವಿರುದ್ಧವೂ ಅದ್ಭುತವಾಗಿ ರನ್ ಗಳಿಸುತ್ತಿರುವುದು ಗ್ರೇಟ್. ಆದರೆ ಕೊಹ್ಲಿಗೆ ತಾಕತ್ತಿದ್ದರೆ ನಮ್ಮ ಎದುರು ರನ್ ಗಳಿಸಿ ತೋರಿಸಲಿ. ನಮ್ಮ ಬೌಲರ್ ಗಳೆದುರು ಕೊಹ್ಲಿಗೆ ರನ್ ಗಳಿಸುವುದು ಸುಲಭವಲ್ಲ ಎಂದು ಮಿಕಿ