ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಲ್ಲಿ ಈಗ ಟೀಂ ಇಂಡಿಯಾದ್ದೇ ಮಾತು. ಹಾಗಂತ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಯೇನಾದ್ರೂ ನಡೆಯುತ್ತಾ ಎಂದು ಕೇಳಬೇಡಿ. ಈ ಖುಷಿಗೆ ಕಾರಣ ಬೇರೆಯೇ ಇದೆ. ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಉಭಯ ದೇಶಗಳ ನಡುವೆ ಸರಣಿ ನಡೆಯದಿದ್ದರೂ, ಕ್ರಿಕೆಟಿಗರು ಸ್ನೇಹ ಸಂಬಂಧ ಹೊಂದಿದ್ದಾರೆ. ಇದೇ ಸ್ನೇಹದಿಂದ ಟೀಂ ಇಂಡಿಯಾ ಆಟಗಾರರು, ಅಫ್ರಿದಿಗೆ ಆಟಗಾರರ ಸಹಿಯುಳ್ಳ ಟೀಂ ಇಂಡಿಯಾ