ಕರಾಚಿ: ಕ್ರಿಕೆಟಿಗರು ಫಾರ್ಮ್ ಕಳೆದುಕೊಂಡಾಗ ಅಭಿಮಾನಿಗಳು ಯದ್ವಾ ತದ್ವಾ ಕಾಲೆಳೆಯುತ್ತಾರೆ. ಅದರಲ್ಲೂ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಇನ್ನಿಲ್ಲದ ಟೀಕೆ ಎದುರಿಸಬೇಕಾಗುತ್ತದೆ. ಅಂತಹದ್ದೇ ಟೀಕೆಗೆ ಆಹಾರವಾಗಿದ್ದಾರೆ ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್. ಉಮರ್ ಅಕ್ಮಲ್ ಇತ್ತೀಚೆಗೆ ಹೇಳಿಕೊಳ್ಳುವಂತಹ ಫಾರ್ಮ್ ನಲ್ಲಿಲ್ಲ. ರನ್ ಗಳಿಸಲು ಪರದಾಡುತ್ತಿದ್ದಾರೆ. ಹೀಗಿರುವಾಗ ಅಭಿಮಾನಿಗಳು ಸುಮ್ಮನೆ ಬಿಡುತ್ತಾರೆಯೇ? ಉಮರ್ ತೀರಿಕೊಂಡಿದ್ದಾರೆಂದು ಟ್ರೋಲ್ ಮಾಡಿದ್ದರು.ಈ ಸುಳ್ಳು ಸುದ್ದಿಯನ್ನು ಅಲ್ಲಗಳೆಯಲು ಕೊನೆಗೆ ಸ್ವತಃ ಉಮರ್ ವಿಡಿಯೋ ಸಂದೇಶ ಅಪ್ ಲೋಡ್