ಪಾಕಿಸ್ತಾನದ ಹಿಂದೂಗಳಿಗೆ ಸಹಾಯ ಮಾಡಲು ಹರ್ಭಜನ್, ಯುವರಾಜ್ ಸಿಂಗ್ ಗೆ ಪಾಕ್ ಕ್ರಿಕೆಟಿಗನ ಮನವಿ

ಇಸ್ಲಾಮಾಬಾದ್| Krishnaveni K| Last Modified ಶನಿವಾರ, 4 ಏಪ್ರಿಲ್ 2020 (09:31 IST)
ಇಸ್ಲಾಮಾಬಾದ್: ಮೊನ್ನೆಯಷ್ಟೇ ಶಾಹಿದ್ ಅಫ್ರಿದಿಯ ಚ್ಯಾರಿಟಿಗೆ ಕೊರೋನಾ ವಿರುದ್ಧ ಹೋರಾಡಲು ನೆರವಾಗುವಂತೆ ಕರೆ ಕೊಟ್ಟಿದ್ದ ಟೀಂ ಇಂಡಿಯಾ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಗೆ ಈಗ ಅಲ್ಲಿನ ಅಲ್ಪಸಂಖ್ಯಾತರಿಗೂ ನೆರವು ನೀಡುವಂತೆ ಮನವಿ ಮಾಡಲಾಗಿದೆ.  
> ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಧನೀಶ್ ಕನೇರಿಯಾ ಈ ಮನವಿ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್ ಧರ್ಮೀಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪವಿದೆ.>   ಹೀಗಾಗಿ ಅವರಿಗೆ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದು, ಇವರಿಗೆ ನೆರವು ನೀಡಿ ಕನೇರಿಯಾ ಟ್ವೀಟ್ ಮೂಲಕ ಭಾರತೀಯ ಕ್ರಿಕೆಟಿಗರಿಗೆ ಮನವಿ ಮಾಡಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :