Widgets Magazine

ಭಾರತೀಯ ಯುವತಿಯ ವಿವಾಹವಾದ ಪಾಕ್ ಕ್ರಿಕೆಟಿಗ ಹಸನ್ ಅಲಿ

ದುಬೈ| Krishnaveni K| Last Modified ಬುಧವಾರ, 21 ಆಗಸ್ಟ್ 2019 (09:25 IST)
ದುಬೈ: ಶೊಯೇಬ್ ಮಲಿಕ್ ನಂತರ ಮತ್ತೊಬ್ಬ ಪಾಕಿಸ್ತಾನ ಕ್ರಿಕೆಟಿಗ ಹಸನ್ ಅಲಿ ಭಾರತೀಯ ಮೂಲದ ಯುವತಿ ಶಮಿಯಾ ಎಂಬವರನ್ನು ದುಬೈನಲ್ಲಿ ನಿನ್ನೆ ವಿವಾಹವಾಗಿದ್ದಾರೆ.

 
ಸಾನಿಯಾ ಮಿರ್ಜಾ ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು ವಿವಾಹವಾದ ಸಂದರ್ಭದಲ್ಲಿ ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳು ಬಂದಿತ್ತು. ಇವರಿಬ್ಬರ ವಿವಾಹವಾದ ಮೇಲೂ ಈಗಲೂ ಭಾರತ-ಪಾಕ್ ವಿಚಾರಗಳಿಗೆ ಟ್ರೋಲ್ ಆಗುತ್ತಲೇ ಇದ್ದಾರೆ.
 
ಇದೀಗ ಪಾಕ್ ವೇಗಿ ಹಸನ್ ಅಲಿ ಹರ್ಯಾಣ ಮೂಲದ ದುಬೈ ನಿವಾಸಿ ಶಮಿಯಾ ಅರ್ಜೂ ಎಂಬಾಕೆಯನ್ನು ವಿವಾಹವಾಗಿದ್ದಾರೆ.  ದುಬೈನಲ್ಲಿ ನಡೆದ ಸರಳ ನಿಖಾ ಸಮಾರಂಭದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಇವರಿಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :