ಪಾಕಿಸ್ತಾನಕ್ಕೆ ಅದೆಂತಹ ಪೇಚಾಟ ನೋಡಿ. ಟೆಸ್ಟ್ ಕ್ರಿಕೆಟ್ನಲ್ಲಿ ಅದು ಟಾಪ್ನಲ್ಲಿದ್ದರೆ, ಸೀಮಿತ ಓವರ್ಗಳ ಕ್ರಿಕೆಟ್ ರೂಪದಲ್ಲಿ ರೂಪದಲ್ಲಿ ಎಲ್ಲ ತಂಡಗಳಿಗಿಂತ ಕನಿಷ್ಠ ಸ್ಥಾನದಲ್ಲಿದೆ. ಪಾಕಿಸ್ತಾನದ ಈ ಸಂದಿಗ್ಧತೆ ಕ್ರಿಕೆಟ್ನ ವಿವಿಧ ಸ್ವರೂಪಗಳಲ್ಲಿ ಯಶಸ್ವಿಯಾಗಲು ಬೇಕಾದ ನೈಪುಣ್ಯತೆಯಲ್ಲಿ ಬೆಳೆಯುತ್ತಿರುವ ವ್ಯತ್ಯಾಸಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ ಪಾಕಿಸ್ತಾನ ದೀರ್ಘಾವಧಿಯ ಕ್ರಿಕೆಟ್ ರೂಪದಲ್ಲಿ, ಶ್ವೇತ ವಸ್ತ್ರದ ಆಟದಲ್ಲಿ ಸತತವಾಗಿ ಉತ್ತಮ ಪ್ರದರ್ಶನ ತೋರುತ್ತಿದೆ. ಆದರೆ ಬಣ್ಣದ ಉಡುಗೆಯ ಆಟದಲ್ಲಿ ಶೋಚನೀಯ ಸ್ಥಿತಿಯಲ್ಲಿದೆ. ಟಿ20 ಶ್ರೇಯಾಂಕದಲ್ಲಿ