ಸಿಡ್ನಿ: ವಿರಾಟ್ ಕೊಹ್ಲಿ ತನ್ನನ್ನು ಕೆಣಕಿದವರಿಗೆ ಎದಿರೇಟು ಕೊಡದೇ ಇರುವ ಜಾಯಮಾನದವರೇ ಅಲ್ಲ. ಈ ಭಯಕ್ಕೇ ಇದೀಗ ಆಸ್ಟ್ರೇಲಿಯಾ ಬೌಲರ್ ಪ್ಯಾಟ್ ಕ್ಯುಮಿನ್ಸ್ ತಾವು ಹಿಂದೆ ನೀಡಿದ್ದ ಹೇಳಿಕೆಯನ್ನೇ ಉಲ್ಟಾ ಮಾಡಿದರೇ?!ಪ್ಯಾಟ್ ಕ್ಯುಮಿನ್ಸ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಮುಂದಿನ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಒಂದೇ ಒಂದು ಶತಕ ಹೊಡೆಯಲ್ಲ ಎಂದಿದ್ದರು. ಆದರೆ ಈಗ ತಮ್ಮ ಹೇಳಿಕೆಯನ್ನೇ ಬದಲಿಸಿದ್ದಾರೆ.ಕ್ರಿಕೆಟ್ ಆಸ್ಟ್ರೇಲಿಯಾಗೆ ನೀಡಿದ ಸಂದರ್ಶನದಲ್ಲಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ.