ಮುಂಬೈ: ಮುಂಬರುವ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದ ಅಂಬಟಿ ರಾಯುಡು ಇತ್ತೀಚೆಗೆ ಟ್ವೀಟ್ ಮೂಲಕ ಪರೋಕ್ಷವಾಗಿ ಬೇಸರ ಹೊರಹಾಕಿದ್ದರು. ಇದೀಗ ರಾಯುಡು ಬೆಂಬಲಕ್ಕೆ ಕ್ರಿಕೆಟಿಗ ಪ್ರಗ್ಯಾನ್ ಓಝಾ ಬಂದಿದ್ದಾರೆ.ಅಂಬಟಿ ರಾಯುಡು ನಾನು ವಿಶ್ವಕಪ್ ನೋಡಲು 3 ಡಿ ಕನ್ನಡಕ ಖರೀದಿಸಿರುವೆ ಎಂದು ಪರೋಕ್ಷವಾಗಿ ತನ್ನನ್ನು ಆಯ್ಕೆ ಮಾಡದೇ ಇದ್ದಿದ್ದಕ್ಕೆ ಟಾಂಗ್ ಕೊಟ್ಟಿದ್ದರು.ಇದೀಗ ಈ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಿರುವ ಸ್ಪಿನ್ನರ್ ಪ್ರಗ್ಯಾನ್ ಓಝಾ ಇದು ಹೈದಾರಾಬಾದ್ ಮೂಲದ ಆಟಗಾರರ ಪರಿಸ್ಥಿತಿ.