ಇಂಗ್ಲೆಂಡ್ ಗೆ ತೆರಳಿದ ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ

ಕೊಲೊಂಬೋ| Krishnaveni K| Last Modified ಭಾನುವಾರ, 1 ಆಗಸ್ಟ್ 2021 (12:44 IST)
ಕೊಲೊಂಬೋ: ಟೀಂ ಇಂಡಿಯಾ ಕ್ರಿಕೆಟಿಗರಾದ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಶ್ರೀಲಂಕಾದಿಂದ ನೇರವಾಗಿ ಇಂಗ್ಲೆಂಡ್ ಗೆ ತೆರಳಿದ್ದಾರೆ.
 

ಇಂಗ್ಲೆಂಡ್ ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಭಾಗವಾಗಲು ಈ ಇಬ್ಬರು ಯುವ ಕ್ರಿಕೆಟಿಗರಿಗೆ ಕರೆ ಬಂದಿತ್ತು. ಅದರಂತೆ ಲಂಕಾ ಪ್ರವಾಸ ಮುಗಿಸಿ ಇನ್ನೇನು ಹೊರಡಬೇಕೆಂದಿದ್ದಾಗ ಕೃನಾಲ್ ಪಾಂಡ್ಯಗೆ ಕೊರೋನಾ ತಗುಲಿದ್ದರಿಂದ ಇಬ್ಬರೂ ಇಂಗ್ಲೆಂಡ್ ಗೆ ತೆರಳುವುದು ಅನುಮಾನವಾಗಿತ್ತು.
 
ಆದರೆ ಕೊರೋನಾ ಪರೀಕ್ಷೆಯಲ್ಲಿ ಇಬ್ಬರಿಗೂ ನೆಗೆಟಿವ್ ವರದಿ ಬಂದಿರುವುದರಿಂದ ಬ್ರಿಟನ್ ಸರ್ಕಾರ ಕ್ರೀಡಾಳುಗಳಿಗಾಗಿಯೇ ಮಾಡಿರುವ ಹೊಸ ಟ್ರಾವೆಲ್ ನಿಯಮಗಳಿಗನುಸಾರವಾಗಿ ಇಬ್ಬರೂ ಇಂಗ್ಲೆಂಡ್ ವಿಮಾನವೇರಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :