ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಆರಂಭಿಕ ಸ್ಥಾನ ಪಡೆದುಕೊಂಡು ಮತ್ತೆ ಕಳಪೆ ಫಾರ್ಮ್ ಪ್ರದರ್ಶಿಸಿದ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ಇನ್ನಿಲ್ಲದಂತೆ ಟ್ರೋಲ್ ಆಗಿದ್ದಾರೆ.ಪೃಥ್ವಿ ಶಾ ಟೀಂ ಇಂಡಿಯಾ ಪರ ಮೊದಲ ಬಾರಿಗೆ ಆಡಿದಾಗ ಅವರು ಆಡುವ ಶೈಲಿ ನೋಡಿ ಇವರು ಆಧುನಿಕ ಸೆಹ್ವಾಗ್ ಎಂದು ಹಲವರು ಹೊಗಳಿ ಅಟ್ಟಕ್ಕೇರಿಸಿದ್ದರು. ಸೆಹ್ವಾಗ್ ರಂತೇ ಟೆಸ್ಟ್ ಪಂದ್ಯದಲ್ಲೂ ನಿರ್ಬಿಡವಾಗಿ ಬ್ಯಾಟ್ ಬೀಸುತ್ತಿದ್ದ