ರೋಹಿತ್ ಶರ್ಮಾ ಮೇಲೆ ಅದೇನು ಕೋಪ ಇತ್ತೋ! ಪೃಥ್ವಿ ಶಾ ಹೀಗೆ ಮಾಡೋದಾ?!

ಬ್ರಿಸ್ಬೇನ್| Krishnaveni K| Last Modified ಶುಕ್ರವಾರ, 15 ಜನವರಿ 2021 (10:56 IST)
ಬ್ರಿಸ್ಬೇನ್: ಆಡುವ ಬಳಗದಲ್ಲಿ ಸ್ಥಾನ ಸಿಗದೇ ಇದ್ದರೂ ಆಸ್ಟ್ರೇಲಿಯಾ ವಿರುದ್ಧ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿರುವ ಪೃಥ್ವಿ ಶಾ ಇಂದು ನೆಟ್ಟಿಗರಿಂದ ತೀವ್ರ ಟ್ರೋಲ್ ಗೊಳಗಾಗಿದ್ದಾರೆ.
 

ಕಳಪೆ ಫಾರ್ಮ್ ನಿಂದಾಗಿ ತಂಡದಿಂದ ಹೊರಗುಳಿದಿರುವ ಪೃಥ್ವಿ ಶಾ ಫೀಲ್ಡಿಂಗ್ ಮಾಡುವಾಗ ಚೆಂಡನ್ನು ವಿಕೆಟ್ ಎಸೆಯದೇ ಬಲವಾಗಿ ರೋಹಿತ್ ಶರ್ಮಾ ಮೈಗೆ ಎಸೆದು ಪ್ರಮಾದವೆಸಗಿದ್ದಾರೆ. ಮೊದಲೇ ಗಾಯದ ಗೂಡಾಗಿರುವ ಟೀಂ ಇಂಡಿಯಾಕ್ಕೆ ಈ ರೀತಿಯ ಪ್ರಮಾದಗಳು ದುಬಾರಿಯಾದರೂ ಅಚ್ಚರಿಯಿಲ್ಲ. ತಕ್ಷಣವೇ ರೋಹಿತ್ ಪೃಥ್ವಿ ಕಡೆಗೆ ಗುರಾಯಿಸಿ ಚೆಂಡನ್ನು ಬೌಲರ್ ಕಡೆಗೆ ನೀಡಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಪೃಥ್ವಿಗೆ ರೋಹಿತ್ ಮೇಲೆ ಅದೇನು ಸಿಟ್ಟಿತ್ತೋ ಎಂದು ತಮಾಷೆ ಮಾಡಿದ್ದಾರೆ. ಅಲ್ಲದೆ, ಇನ್ನು, ಕೆಲವರು ಪೃಥ್ವಿ ಆಡುವ ಬಳಗದಲ್ಲಿ ಇಲ್ಲದೇ ಇದ್ದರೂ ಆಸ್ಟ್ರೇಲಿಯಾಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :