Widgets Magazine

ಕೊನೆಗೂ ಮುತ್ತಯ್ಯ ಮುರಳೀಧರನ್ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್

ವಿಶಾಖಪಟ್ಟಣ| Krishnaveni K| Last Modified ಸೋಮವಾರ, 7 ಅಕ್ಟೋಬರ್ 2019 (08:51 IST)
ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಶ್ವವಿಖ್ಯಾತ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

 
ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 350 ವಿಕೆಟ್ ಕಬಳಿಸಿದ ಮುರಳೀಧರನ್ ಸಾಧನೆಯನ್ನು ಅಶ್ವಿನ್ ಸರಿಗಟ್ಟಿದ್ದಾರೆ. ಇಬ್ಬರೂ 66 ಪಂದ್ಯಗಳಿಂದ ಈ ದಾಖಲೆ ಮಾಡಿದ್ದಾರೆ.
 
ಅಲ್ಲದೆ ಅಶ್ವಿನ್ 350 ವಿಕೆಟ್ ಅತೀ ವೇಗವಾಗಿ ಪಡೆದ ಭಾರತೀಯ ಸ್ಪಿನ್ನರ್ ಗಳ ಪೈಕಿ ಅನಿಲ್ ಕುಂಬ್ಳೆ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಕುಂಬ್ಳೆ 350 ವಿಕೆಟ್ ಪಡೆಯಲು 77 ಟೆಸ್ಟ್ ಪಂದ್ಯವಾಡಿದ್ದರು.
ಇದರಲ್ಲಿ ಇನ್ನಷ್ಟು ಓದಿ :