ಕ್ರಿಕೆಟಿಗ ಆರ್ ಅಶ್ವಿನ್ ಕುಟುಂಬದ 10 ಮಂದಿಗೆ ಕೊರೋನಾ ಸೋಂಕು

ಚೆನ್ನೈ| Krishnaveni K| Last Modified ಭಾನುವಾರ, 2 ಮೇ 2021 (10:27 IST)
ಚೆನ್ನೈ: ಇತ್ತೀಚೆಗಷ್ಟೇ ಕೊರೋನಾ ಕಾರಣದಿಂದ ಐಪಿಎಲ್ ತೊರೆದು ತವರಿಗೆ ಬಂದಿರುವ ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಕುಟುಂಬದ 10 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ತಿಳಿದುಬಂದಿದೆ.

 
ಕೊರೋನಾ ಭೀತಿಯಿಂದಾಗಿ ಕುಟುಂಬದ ಜೊತೆಗಿರಲು ಐಪಿಎಲ್ ತೊರೆಯುವುದಾಗಿ ಅಶ್ವಿನ್ ಪ್ರಕಟಿಸಿದ್ದರು. ಪರಿಸ್ಥಿತಿ ತಿಳಿಗೊಂಡ ಬಳಿಕ ಐಪಿಎಲ್ ಗೆ ಮರಳುವುದಾಗಿ ಹೇಳಿದ್ದರು.
 
ಇದೀಗ ರವಿಚಂದ್ರನ್ ಪತ್ನಿ ಪ್ರೀತಿ ತಮ್ಮ ಕುಟುಂಬದವರಿಗೆ ಕೊರೋನಾ ತಗುಲಿರುವುದನ್ನು ಬಹಿರಂಗಪಡಿಸಿದ್ದಾರೆ. ಒಟ್ಟು 10 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 6 ವಯಸ್ಕರು ಮತ್ತು ನಾಲ್ವರು ಮಕ್ಕಳೂ ಸೋಂಕಿತರಾಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :