ಇಂಧೋರ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೊಸ ದಾಖಲೆ ಮಾಡಿದ್ದಾರೆ.ರವಿಚಂದ್ರನ್ ಅಶ್ವಿನ್ ತವರಿನಲ್ಲಿ 250 ನೇ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ತವರು ನೆಲದಲ್ಲಿ ವೇಗವಾಗಿ 250 ವಿಕೆಟ್ ಕಬಳಿಸಿದ ದಾಖಲೆ ಮಾಡಿದರು. ಅಶ್ವಿನ್ ಬಿಟ್ಟರೆ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಈ ದಾಖಲೆ ಮಾಡಿದ್ದಾರೆ.ಆದರೆ ಕುಂಬ್ಳೆಗೆ ಈ ಸಾಧನೆ ಮಾಡಲು 43 ಪಂದ್ಯ ಬೇಕಾಗಿತ್ತು.