ಚೆನ್ನೈ: ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂಲಕ ಪ್ರವರ್ಧಮಾನಕ್ಕೆ ಬಂದ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ತಮ್ಮ ಮಾತೃ ತಂಡವನ್ನು ಹೊಗಳುವ ಭರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಎರಡು ವರ್ಷದ ನಿಷೇಧ ಶಿಕ್ಷೆ ಮುಗಿಸಿ ಐಪಿಎಲ್ ಗೆ ಮರಳುತ್ತಿರುವ ತಂಡವನ್ನು ಅಶ್ವಿನ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ವಿಮಾನ ಅಪಘಾತದಲ್ಲಿ ತನ್ನ ಎಲ್ಲಾ ಆಟಗಾರರನ್ನು ಕಳೆದುಕೊಂಡ ಮೇಲೆ ಕಣಕ್ಕೆ ವಾಪಸ್ ಮಾಡಿದ ಘಟನೆಗೆ ಹೋಲಿಸಿದ್ದರು.