ಅಪ್ಪ ರಾಹುಲ್ ದ್ರಾವಿಡ್ ಹಾದಿಯಲ್ಲಿ ಪುತ್ರ ಸಮಿತ್: ಬ್ಯಾಟಿಂಗ್ ನಲ್ಲಿ ಪರಾಕ್ರಮ

ಬೆಂಗಳೂರು| Krishnaveni K| Last Modified ಶನಿವಾರ, 21 ಡಿಸೆಂಬರ್ 2019 (10:36 IST)
ಬೆಂಗಳೂರು: ಟೀಂ ಇಂಡಿಯಾದ ವಾಲ್ ಎಂದೇ ಕರೆಯಿಸಿಕೊಳ್ಳುತ್ತಿದ್ದ ಲೆಜೆಂಡ್ ಬ್ಯಾಟ್ಸ್ ಮನ್ ರಾಹುಲ್ ದ್ರಾವಿಡ್. ಇದೀಗ ಅವರ ಪುತ್ರ ಸಮಿತ್ ಅಪ್ಪನಿಗೆ ತಕ್ಕ ಮಗ ಎಂದು ಸಾಬೀತುಪಡಿಸಿದ್ದಾನೆ.

 
ಕೋಲ್ಕೊತ್ತಾದಲ್ಲಿ ನಡೆಯುತ್ತಿರುವ ಅಂಡರ್ 14- ಅಂತರ್ ವಲಯ ಟೂರ್ನಮೆಂಟ್ ನಲ್ಲಿ ಧಾರವಾಡ ವಲಯ ಉಪಾಧ್ಯಕ್ಷರ ಇಲೆವೆನ್ ಪರ ಆಡಿದ ದ್ರಾವಿಡ್ ಪುತ್ರ ಸಮಿತ್ ದ್ವಿಶತಕ ಸಿಡಿಸಿದ್ದಲ್ಲದೆ ಬೌಲಿಂಗ್ ನಲ್ಲೂ ಮೂರು ವಿಕೆಟ್ ಕಬಳಿಸಿ ಮೆರೆದಿದ್ದಾನೆ.
 
ಇದರಿಂದಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಒಟ್ಟು 255 ಎಸೆತ ಎದುರಿಸಿದ ಸಮಿತ್ 22 ಬೌಂಡರಿಗಳೊಂದಿಗೆ 201 ರನ್ ಸಿಡಿಸಿದ್ದಾನೆ. ಈ ಮೂಲಕ ಅಪ್ಪನಂತೇ ತಾನೂ ಉತ್ತಮ ಬ್ಯಾಟ್ಸ್ ಮನ್ ಆಗುವ ಲಕ್ಷಣ ತೋರಿದ್ದಾನೆ.
ಇದರಲ್ಲಿ ಇನ್ನಷ್ಟು ಓದಿ :