ನವದೆಹಲಿ: ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಹೊಸ ಅಲೆ ಸೃಷ್ಟಿಸಿದ ಆಟಗಾರ ಹಾರ್ದಿಕ್ ಪಾಂಡ್ಯ. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಈ ಕ್ರಿಕೆಟಿಗನಿಗೆ ಮಾಜಿ ನಾಯಕ, ಸದ್ಯಕ್ಕೆ ಎ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಹೊಗಳಿದ್ದಾರೆ. ಒಂದು ಕಾಲದಲ್ಲಿ ಇದೇ ದ್ರಾವಿಡ್ ಗರಡಿಯಲ್ಲಿ ಪಳಗಿದ ಹಾರ್ದಿಕ್ ಟೀಂ ಇಂಡಿಯಾಗೆ ಕಾಲಿಟ್ಟ ಆರಂಭದ ದಿನಗಳಲ್ಲೇ ತಮ್ಮ ಯಶಸ್ಸಿಗೆ ದ್ರಾವಿಡ್ ತರಬೇತಿ ಕಾರಣ ಎಂದಿದ್ದರು. ಇದೀಗ ಶಿಷ್ಯನಿಗೆ ಸ್ವತಃ ದ್ರಾವಿಡ್ ಶಹಬಾಶ್ ಗಿರಿ