ಮುಂಬೈ: ಕ್ರಿಕೆಟಿಗ ಎಂದರೆ ಹಣಕಾಸಿಗೆ ಏನೂ ಕೊರತೆಯಿಲ್ಲ ಎನ್ನುವುದು ಎಲ್ಲಾ ಕ್ರಿಕೆಟಿಗರ ವಿಚಾರದಲ್ಲಿ ಸತ್ಯವಲ್ಲ. ಅವಕಾಶಗಳಿಲ್ಲದೇ ಹೋದಾಗ, ಫಾರ್ಮ್ ಕಳೆದುಕೊಂಡು ಮೂಲೆಗುಂಪಾದಾಗ ಕ್ರಿಕೆಟಿಗರೂ ಹಣಕ್ಕಾಗಿ ಪರದಾಡಬೇಕಾಗುತ್ತದೆ.ಈ ರೀತಿ ಹಣಕಾಸಿನ ಮುಗ್ಗಟ್ಟು ಎದುರಿಸುವ ಯುವ ಕ್ರಿಕೆಟಿಗರ ನೆರವಿಗೆ ಇದೀಗ ರಾಹುಲ್ ದ್ರಾವಿಡ್ ಧಾವಿಸಿದ್ದಾರೆ. ಇಂತಹ ಕ್ರಿಕೆಟಿಗರಿಗೆ ಕ್ರಿಕೆಟ್ ಹೊರತಾಗಿ ಬೇರೊಂದು ಕ್ಷೇತ್ರದಲ್ಲಿ ಉದ್ಯೋಗ ಮಾಡಲು ನೆರವಾಗುವಂತೆ ಬಿಸಿಸಿಐ ಅಧಿಕಾರಿಗಳಿಗೆ ದ್ರಾವಿಡ್ ಸಲಹೆ ನೀಡಿದ್ದಾರೆ.ದ್ರಾವಿಡ್ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಮತ್ತು ಎನ್