ಕೊಲೊಂಬೋ: ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಅವಕಾಶ ಪಡೆದರೂ ಅದನ್ನು ಸರಿಯಾಗಿ ಬಳಸಿಕೊಳ್ಳದ ಸಂಜು ಸ್ಯಾಮ್ಸನ್ ಪ್ರದರ್ಶನದಿಂದ ಕೋಚ್ ರಾಹುಲ್ ದ್ರಾವಿಡ್ ಬೇಸರಗೊಂಡಿದ್ದಾರೆ. ದ್ರಾವಿಡ್ ಎ ತಂಡದ ಕೋಚ್ ಆಗಿದ್ದಲೇ ಸಂಜು ಸ್ಯಾಮ್ಸನ್ ರನ್ನು ಪಳಗಿಸಿದವರು. ಪದೇ ಪದೇ ಟೀಂ ಇಂಡಿಯಾಗೆ ಆಯ್ಕೆಯಾಗುತ್ತಿದ್ದರೂ ಅವರಿಗೆ ಆಡುವ ಅವಕಾಶ ಸಿಗುತ್ತಿರಲಿಲ್ಲ.ಈ ಬಾರಿ ಆಡುವ ಅವಕಾಶ ಸಿಕ್ಕರೂ ಸಂಜು ಒಂದೇ ಒಂದು ಗೆಲುವಿನ ಇನಿಂಗ್ಸ್ ಆಡಲಿಲ್ಲ. ನಿಂತು ಆಡುವ ಲಕ್ಷಣ ತೋರಲಿಲ್ಲ. ಇದರಿಂದ