ರಾಂಚಿ: ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕೆಲವೇ ವರ್ಷದಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿ ಜವಾಬ್ದಾರಿಯುತವಾಗಿ ನಡೆದುಕೊಂಡ ಧೋನಿ ಒಮ್ಮೆ ರಾಹುಲ್ ದ್ರಾವಿಡ್ ರ ಕೋಪಕ್ಕೆ ಗುರಿಯಾಗಿದ್ದರಂತೆ. ಈ ಘಟನೆಯನ್ನು ಸಂದರ್ಶನವೊಂದರಲ್ಲಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಿಚ್ಚಿಟ್ಟಿದ್ದಾರೆ. ಆರಂಭದ ದಿನಗಳಲ್ಲಿ ಧೋನಿ ಬೇಕಾಬಿಟ್ಟಿ ಆಡುತ್ತಿದ್ದಾಗ ನಡೆದ ಘಟನೆಯಿದು. ಆಗ ದ್ರಾವಿಡ್ ತಂಡದ ನಾಯಕರಾಗಿದ್ದರು.ಪದೇ ಪದೇ ಧೋನಿ ಕೆಟ್ಟ ಹೊಡೆತಗಳಿಗೆ ಕೈ ಹಾಕಿ ತಂಡಕ್ಕೆ ಫಿನಿಶರ್ ನ ಪಾತ್ರ ನಿಭಾಯಿಸುವಲ್ಲಿ