ಬೇ ಓವಲ್: ವಿಶ್ವಕಪ್ ಎನ್ನುವ ಶಬ್ಧಕ್ಕೇ ವಿಶೇಷತೆಯಿದೆ. ವಿಶ್ವ ಚಾಂಪಿಯನ್ ಆಗುವುದು ಎಂದರೆ ತಮಾಷೆಯ ಮಾತಲ್ಲ. ಆದರೆ ರಾಹುಲ್ ದ್ರಾವಿಡ್ ಮಾತ್ರ ತಮ್ಮ ಹುಡುಗರ ಗೆಲ್ಲಿಸಿ ತಣ್ಣಗೆ ಹಿಮಾಲಯದಂತೆ ತೋರಿದರು. ತಮ್ಮ ಹುಡುಗರು ವಿಶ್ವಕಪ್ ಗೆದ್ದ ಖುಷಿಯನ್ನು ಕುಣಿದು ಕುಪ್ಪಳಿಸಿ ಅನುಭವಿಸುತ್ತಿದ್ದರೂ ದ್ರಾವಿಡ್ ಮುಖದಲ್ಲಿ ಕೊಂಚವೂ ಬದಲಾವಣೆಯಿಲ್ಲ. ಎಂದಿನಂತೆ ಅದೇ ಶಾಂತತೆ, ನಿರ್ಲಿಪ್ತ ಭಾವದಲ್ಲಿ ಮೈದಾನಕ್ಕೆ ನಡೆದು ಬಂದು ಆಟಗಾರರನ್ನು ಅಭಿನಂದಿಸಿದರು!ನಂತರ ಸಂದರ್ಶಕರು ಮೈಕ್ ಹಿಡಿದು ಬಂದಾಗಲೂ ನನಗೆ