ಮುಂಬೈ: ವಿರಾಟ್ ಕೊಹ್ಲಿ ಡಿಸೆಂಬರ್ ನಲ್ಲಿ ನಡೆಯಲಿರುವ ಲಂಕಾ ಸರಣಿಯಿಂದ ವಿಶ್ರಾಂತಿ ನೀಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರೂ ಅದು ಪುರಸ್ಕೃತಗೊಂಡಿಲ್ಲ ಎನ್ನುವ ವರದಿಗಳನ್ನು ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಅಲ್ಲಗಳೆದಿದ್ದಾರೆ. ಎಲ್ಲರಿಗೂ ವಿಶ್ರಾಂತಿ ಬೇಕು. ರೊಟೇಷನ್ ಪದ್ಧತಿಯಿದ್ದರೆ ಎಲ್ಲರಿಗೂ ಒಳ್ಳೆಯದು. ಸತತ ಕ್ರಿಕೆಟ್ ನಿಂದ ಬಳಲಿದ್ದಾಗ ಕೊಂಚ ವಿಶ್ರಾಂತಿ ನೀಡಬೇಕು. ಬಹುಶಃ ಕೊಹ್ಲಿಗೂ ವಿಶ್ರಾಂತಿ ಬೇಕು. ಅವರಿಗೆ ಯಾವಾಗ ಬೇಕೆನಿಸುತ್ತದೆ ಎಂದು ತಂಡದ ಮ್ಯಾನೇಜ್ ಮೆಂಟ್ ತೀರ್ಮಾನಿಸುತ್ತದೆ.