Widgets Magazine

ಇಂದಿನಿಂದ ಎನ್ ಸಿಗೆ ರಾಹುಲ್ ದ್ರಾವಿಡ್ ಹೆಡ್ ಮಾಸ್ಟರ್

ಬೆಂಗಳೂರು| Krishnaveni K| Last Modified ಸೋಮವಾರ, 1 ಜುಲೈ 2019 (09:54 IST)
ಬೆಂಗಳೂರು: ವಾಲ್ ರಾಹುಲ್ ದ್ರಾವಿಡ್ ಇದುವರೆಗೆ ಭಾರತ ಎ ತಂಡದ ಕೋಚ್ ಆಗಿ ಹಲವು ಕ್ರಿಕೆಟಿಗರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಕಾರಣರಾಗಿದ್ದರು. ಇದೀಗ ದ್ರಾವಿಡ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಚುಕ್ಕಾಣಿ ಹಿಡಿಯಲಿದ್ದಾರೆ.

 
ದ್ರಾವಿಡ್ ಇಂದಿನಿಂದ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇದಕ್ಕಾಗಿ ದ್ರಾವಿಡ್ ರನ್ನು ಈಗಾಗಲೇ ಎ ತಂಡದ ಕೋಚ್ ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಆದರೆ ಯುವಕರ ತಂಡಕ್ಕೆ ದ್ರಾವಿಡ್ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ.
 
ಎನ್ ಸಿಎ ಯುವ ಪ್ರತಿಭೆಗಳನ್ನು ಗುರುತಿಸುವ ತಾಣವಾಗಿದ್ದು, ಇಲ್ಲಿ ದ್ರಾವಿಡ್ ಗರಡಿಯಲ್ಲಿ ಪಳಗುವ ಯುವ ಕ್ರಿಕೆಟಿಗರು ಮುಂದೊಂದು ದಿನ ಟೀಂ ಇಂಡಿಯಾಕ್ಕೆ ಆಯ್ಕೆಯಾಗಬಹುದು.
ಇದರಲ್ಲಿ ಇನ್ನಷ್ಟು ಓದಿ :