ಮುಂಬೈ: ಶ್ರೀಲಂಕಾ ವಿರುದ್ಧದ ಸೀಮಿತ ಓವರ್ ಗಳ ಸರಣಿಗೆ ಟೀಂ ಇಂಡಿಯಾ ಶಿಖರ್ ಧವನ್ ನೇತೃತ್ವದಲ್ಲಿ ಪ್ರಯಾಣ ಬೆಳೆಸಿದೆ. ಆದರೆ ಕ್ರಿಕೆಟಿಗರಿಂತಲೂ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು ಕೋಚ್ ರಾಹುಲ್ ದ್ರಾವಿಡ್.ಲಂಕಾ ಸರಣಿಗೆ ಟೀಂ ಇಂಡಿಯಾಕ್ಕೆ ಮುಖ್ಯ ಕೋಚ್ ಆಗಿ ‘ವಾಲ್’ ರಾಹುಲ್ ದ್ರಾವಿಡ್ ಕಾರ್ಯ ನಿರ್ವಹಿಸಲಿದ್ದಾರೆ. ನಿನ್ನೆ ಪ್ರಯಾಣಕ್ಕೆ ಮೊದಲು ಶಿಖರ್ ಧವನ್ ಜೊತೆಗೆ ರಾಹುಲ್ ದ್ರಾವಿಡ್ ಕೂಡಾ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಈ ಪತ್ರಿಕಾಗೋಷ್ಠಿಯಲ್ಲಿ ಎಲ್ಲರ ಕೇಂದ್ರ ಬಿಂದು ದ್ರಾವಿಡ್