ಒಂದೇ ವೇದಿಕೆಯಲ್ಲಿ ಕಿಚ್ಚ ಸುದೀಪ್-ರಾಹುಲ್ ದ್ರಾವಿಡ್: ಫ್ಯಾನ್ಸ್ ಗೆ ಖುಷಿಯೋ ಖುಷಿ

ಬೆಂಗಳೂರು| Krishnaveni K| Last Modified ಬುಧವಾರ, 10 ಫೆಬ್ರವರಿ 2021 (09:40 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಕ್ರಿಕೆಟಿಗ ‘ವಾಲ್’ ರಾಹುಲ್ ದ್ರಾವಿಡ್ ಒಂದೇ ವೇದಿಕೆಯಲ್ಲಿ ಕಂಡುಬಂದಿದ್ದು, ಅಭಿಮಾನಿಗಳು ಈ ಇಬ್ಬರನ್ನೂ ಜೊತೆಗೇ ನೋಡಿ ಖುಷಿಯಾಗಿದ್ದಾರೆ.
 

ಬಿಜಿಎಸ್ ಕ್ರಿಕೆಟ್ ಮೈದಾನ ಉದ್ಘಾಟನಾ ಸಮಾರಂಭಕ್ಕೆ ಇಬ್ಬರೂ ಕನ್ನಡದ ಕಣ್ಮಣಿಗಳು ಅತಿಥಿಯಾಗಿದ್ದರು. ಇಬ್ಬರೂ ಒಂದೇ ವೇದಿಕೆಯಲ್ಲಿ ಅಕ್ಕ ಪಕ್ಕ ಕೂತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಬ್ಬರನ್ನೂ ಒಟ್ಟಿಗೇ ನೋಡಿ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :