ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮುಗಿಸಿ ಹೊಸದೊಂದು ಸವಾಲಿಗೆ ಸಿದ್ಧರಾಗಬೇಕಿದೆ. ಈ ಸವಾಲೆಸೆದಿರುವುದು ಬಾಲಿವುಡ್ ನಟ ರಣಬೀರ್ ಕಪೂರ್. ರಣಬೀರ್ ಕಪೂರ್ ಮತ್ತು ವಿರಾಟ್ ಕೊಹ್ಲಿ ಮೈದಾನದಲ್ಲಿ ಪರಸ್ಪರ ತೊಡೆ ತಟ್ಟಲಿದ್ದಾರೆ. ಆದರೆ ಇದು ಕ್ರಿಕೆಟ್ ಗಾಗಿ ಅಲ್ಲ. ಫುಟ್ ಬಾಲ್ ಪಂದ್ಯವೊಂದರಲ್ಲಿ ಇವರಿಬ್ಬರ ತಂಡ ಶಕ್ತಿ ಪ್ರದರ್ಶನ ಮಾಡಲಿದೆ.ಚ್ಯಾರಿಟಿ ಸಂಸ್ಥೆಯೊಂದರ ಸಹಾಯಾರ್ಥ ಪಂದ್ಯದಲ್ಲಿ ಇವರಿಬ್ಬರ ತಂಡ ಪರಸ್ಪರ ಮುಖಾಮುಖಿಯಾಗಲಿದೆ.