ಮುಂಬೈ: ಭಾರತೀಯ ಕ್ರಿಕೆಟ್ ನ ವಾಲ್ ಎಂದೇ ಪರಿಗಣಿಸಲ್ಪಡುವ ರಾಹುಲ್ ದ್ರಾವಿಡ್ ಉಳಿದ ಭಾರತೀಯ ಕ್ರಿಕೆಟಿಗರಿಗಿಂತ ಸದಾ ಒಂದು ಹೆಜ್ಜೆ ಮುಂದಿದ್ದರು ಎಂದು ಪಾಕ್ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಹೊಗಳಿದ್ದಾರೆ.ತಾಂತ್ರಿಕತೆ, ಒತ್ತಡವನ್ನು ನಿಭಾಯಿಸುವ ವಿಚಾರದಲ್ಲಿ ದ್ರಾವಿಡ್ ಇತರ ಭಾರತೀಯ ಕ್ರಿಕೆಟಿಗರಿಗಿಂತ ಒಂದು ಹೆಜ್ಜೆ ಮುಂದಿದ್ದರು. ತೆಂಡುಲ್ಕರ್ ಗೆ ಆರಂಭದಿಂದಲೂ ಆಕ್ರಮಣಕಾರಿಯಾಗಿ ಆಡುವ ಆತ್ಮವಿಶ್ವಾಸವಿತ್ತು. ಆದರೆ ದ್ರಾವಿಡ್ ವೈವಿಧ್ಯಮಯ ಪಾತ್ರ ನಿಭಾಯಿಸಿದರು. ಭಾರತ ವಿಕೆಟ್ ಕಳೆದುಕೊಂಡಾಗ ಅವರು ಗೋಡೆಯಂತೆ ನಿಂತರು