ಕೇಪ್ ಟೌನ್: ಅಕ್ಷಯ್ ಕುಮಾರ್ ನಾಯಕರಾಗಿ ಅಭಿನಯಿಸಿರುವ ಪ್ಯಾಡ್ ಮ್ಯಾನ್ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ಪ್ಯಾಡ್ ಮ್ಯಾನ್ ಚಾಲೆಂಜ್ ಜೋರಾಗಿದೆ. ಇದೀಗ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಪ್ಯಾಡ್ ಹಿಡಿದು ಫೋಟೋ ತೆಗೆಸಿಕೊಂಡು ಸವಾಲು ಪೂರ್ತಿ ಮಾಡಿದ್ದಾರೆ. ಅಷ್ಟೇ ಅಲ್ಲ, ನಾಯಕ ವಿರಾಟ್ ಕೊಹ್ಲಿಗೆ ಪ್ಯಾಡ್ ಹಿಡಿದು ಸಂದೇಶ ನೀಡುವಂತೆ ಸವಾಲು ಹಾಕಿದ್ದಾರೆ. ಈಗಾಗಲೇ ಕ್ರೀಡೆ, ಸಿನಿಮಾ ಕ್ಷೇತ್ರದ ಸೂಪರ್ ಸ್ಟಾರ್ ಗಳು ಒಬ್ಬೊಬ್ಬರಾಗಿ ಈ ಸವಾಲು ಸ್ವೀಕರಿಸಿದ್ದಾರೆ.