ಮುಂಬೈ: ಬಾಲಿವುಡ್ ನಟಿ ನಿಮ್ರತ್ ಕೌರ್ ಜತೆಗಿನ ತಮಗೆ ಅಫೇರ್ ಇದೆ ಎಂದು ಹಬ್ಬಿರುವ ಸುದ್ದಿ ಬಗ್ಗೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ.ನಿನ್ನೆಯೇ ಇದೆಲ್ಲಾ ಸುಳ್ಳು ಸುದ್ದಿ ಎಂದು ನಟಿ ನಿಮ್ರತ್ ಸ್ಪಷ್ಟಪಡಿಸಿದ್ದರು. ಅದರ ಬೆನ್ನಲ್ಲೇ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರವಿಶಾಸ್ತ್ರಿ ಕೂಡಾ ಇದೆಲ್ಲಾ ದನದ ಸೆಗಣಿ ಎನ್ನುವ ಮೂಲಕ ಈ ಸುದ್ದಿ ಸುಳ್ಳು ಎಂದಿದ್ದಾರೆ.ದನದ ಸಗಣಿ ಎಂದರೆ ಸಾಕಲ್ಲವೇ? ಇದುವೇ ಎಲ್ಲವೂ ಹೇಳುತ್ತದೆ. ಹಾಗಿರುವಾಗ ನಾನೇನೂ ಹೇಳಬೇಕಾಗಿಲ್ಲ