ಧೋನಿ ನಿವೃತ್ತಿಯಾಗಲು ನಿಮಗೇಕೆ ಅರ್ಜೆಂಟ್? ರವಿಶಾಸ್ತ್ರಿ ಪ್ರಶ್ನೆ

ಮುಂಬೈ| Krishnaveni K| Last Modified ಶನಿವಾರ, 26 ಅಕ್ಟೋಬರ್ 2019 (09:46 IST)
ಮುಂಬೈ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಧೋನಿ ನಿವೃತ್ತಿ ಬಗ್ಗೆ ಪದೇ ಪದೇ ಪ್ರಶ್ನೆಗಳು ಎದುರಾಗುತ್ತಿರುವುದರ ಬಗ್ಗೆ ಕೋಚ್ ರವಿಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 
ಧೋನಿ ನಿವೃತ್ತಿಯಾಗಬೇಕೆಂದು ನಿಮಗೇಕೆ ಅವಸರ ಎಂದು ಕೋಚ್ ರವಿಶಾಸ್ತ್ರಿ ಮಾಧ್ಯಮಗಳ ಮುಂದೆ ಪ್ರಶ್ನೆ ಮಾಡಿದ್ದಾರೆ. ಮೊನ್ನೆಯಷ್ಟೇ ಆಯ್ಕೆ ಸಮಿತಿ ಸಭೆ ಬಳಿಕ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಧೋನಿಯನ್ನು ಹೊರತಾಗಿ ನಾವು ಯುವ ವಿಕೆಟ್ ಕೀಪರ್ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ನಮ್ಮ ಯೋಜನೆಯಲ್ಲಿ ಧೋನಿಯಿಲ್ಲ ಎಂದಿದ್ದರು.
 
ಅದರ ಬೆನ್ನಲ್ಲೇ ರವಿಶಾಸ್ತ್ರಿ ಈ ಹೇಳಿಕೆ ನೀಡಿದ್ದಾರೆ. ಧೋನಿ ನಿವೃತ್ತಿಗೆ ನಿಮಗೇಕೆ ಅವಸರ? ಭಾರತ ತಂಡಕ್ಕಾಗಿ ಅದ್ಭುತ ಸಾಧನೆ ಮಾಡಿದ ಧೋನಿಯಂತಹ ಆಟಗಾರನ ಬಗ್ಗೆ ಪದೇ ಪದೇ ಹೀಗೆ ಹೇಳುವುದು ಅವರಿಗೆ ಅವಮಾನ ಮಾಡಿದಂತೆ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :