ತವರಿಗೆ ಮರಳಿದ್ದರೂ ವಿರಾಟ್ ಕೊಹ್ಲಿ ನಮ್ಮ ಜೊತೆಗೇ ಇದ್ದರು: ರವಿಶಾಸ್ತ್ರಿ

ಬ್ರಿಸ್ಬೇನ್| Krishnaveni K| Last Modified ಬುಧವಾರ, 20 ಜನವರಿ 2021 (09:41 IST)
ಬ್ರಿಸ್ಬೇನ್:  ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿ ಸರಣಿ ಗೆದ್ದ ಟೀಂ ಇಂಡಿಯಾ ಬಗ್ಗೆ ಕೋಚ್ ರವಿಶಾಸ್ತ್ರಿ ಖುಷಿಯಿಂದಲೇ ಮಾತನಾಡಿದ್ದಾರೆ. ಈ ವೇಳೆ ನಾಯಕ ಕೊಹ್ಲಿಯನ್ನು ಸ್ಮರಿಸಿಕೊಂಡಿದ್ದಾರೆ.

 

ವಿರಾಟ್ ಪಿತೃತ್ವ ರಜೆಗಾಗಿ ತವರಿಗೆ ಮರಳಿದ್ದಾರೆ. ಹಾಗಿದ್ದರೂ ತಂಡದ ಜೊತೆಗೇ ಇದ್ದರು. ನಮ್ಮ ಪ್ರತಿಯೊಬ್ಬ ಆಟಗಾರರಿಗೂ ಸ್ಪೂರ್ತಿ ತುಂಬಿ ಹೋಗಿದ್ದರು. ರೆಹಾನೆ ಕೂಡಾ ಹೊರಗಿನಿಂದ ಮೃದು ಸ್ವಭಾವದವರಂತೆ ಕಂಡರೂ ಆಂತರಿಕವಾಗಿ ಗಟ್ಟಿ ಮನುಷ್ಯ. ಈ ಗೆಲುವಿನ ಬಗ್ಗೆ ನನಗೆ ಮಾತೇ ಹೊರಡುತ್ತಿಲ್ಲ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :