ನವದೆಹಲಿ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿಕೆ ಕೆಲವೊಮ್ಮೆ ಕೆಲವರ ಕೆಂಗಣ್ಣಿಗೆ ಗುರಿಯಾಗುತ್ತದೆ. ಈ ಬಾರಿ ಟಿ20 ಕ್ರಿಕೆಟ್ ಬಗ್ಗೆ ಏನೋ ಹೇಳಲು ಹೋಗಿ ರವಿಶಾಸ್ತ್ರಿ ಅಭಿಮಾನಿಗಳಿಂದು ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ಭಾನುವಾರದ ಪಂದ್ಯ ಗೆದ್ದ ಬಳಿಕ ಮಾತನಾಡಿದ್ದ ರವಿಶಾಸ್ತ್ರಿ ಟಿ20 ಕ್ರಿಕೆಟ್ ನಮಗೆ ದೊಡ್ಡ ವಿಷಯವಲ್ಲ. ನಾವು ಗೆದ್ದರೂ, ಸೋತರೂ ಅದನ್ನು ಕೇರ್ ಮಾಡಲ್ಲ. ನಮಗೆ ಇದು 2019 ರ ವಿಶ್ವಕಪ್ ಗೆ ಪ್ರತಿಭಾವಂತರನ್ನು ಹುಡುಕುವ ವೇದಿಕೆಯಷ್ಟೇ ಎಂದು