ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ತಮ್ಮ ಆಕ್ರಮಣಕಾರಿ ಹೇಳಿಕೆಗಳಿಂದಲೇ ಇತ್ತೀಚೆಗೆ ಸುದ್ದಿಯಾಗುತ್ತಿದ್ದಾರೆ. ಅವರ ಹೇಳಿಕೆಯೊಂದು ಇದೀಗ ಅಭಿಮಾನಿಗಳಲ್ಲಿ ಭಾರೀ ಅಸಮಾಧಾನ ಮೂಡಿಸಿದೆ.ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಸೋತಾಗ ಟೀಕೆ ಎದುರಿಸಿದ್ದನ್ನು ಸ್ಮರಿಸಿಕೊಂಡು ರವಿಶಾಸ್ತ್ರಿ, ಭಾರತದಲ್ಲಿರುವ ಜನ ನಮ್ಮ ಸೋಲನ್ನೇ ಬಯಸುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.ಇದಕ್ಕೆ ಇದೀಗ ಟ್ವಿಟಟಿಗರು ಟಾಂಗ್ ಕೊಟ್ಟಿದ್ದಾರೆ. ರವಿಶಾಸ್ತ್ರಿ ತಲೆಬುಡವಿಲ್ಲದ ನಿರ್ಧಾರ ತೆಗೆದುಕೊಳ್ಳುವಾಗ, ತಂಡದ ಆಯ್ಕೆ ವಿಚಾರದಲ್ಲಿ ಮೂಗು ತೂರಿಸಿ ಭುವಿ, ರೆಹಾನೆಯಂತಹ ಆಟಗಾರರನ್ನು ಕೈ