ರಾಂಚಿ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಆಗಾಗ ನೆಟ್ಟಿಗರಿಂದ ಟ್ರೋಲ್ ಗೊಳಗಾಗುತ್ತಲೇ ಇರುತ್ತಾರೆ. ಈ ಬಾರಿ ನಿದ್ರೆ ಮಾಡಿ ತಮಾಷೆಗೊಳಗಾಗಿದ್ದಾರೆ.ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಗೆಲುವಿನ ಸಂಭ್ರಮಾಚರಿಸಲು ಸಿದ್ಧತೆ ನಡೆಸುತ್ತಿದ್ದರೆ ಪೆವಿಲಿಯನ್ ನಲ್ಲಿ ಕುರ್ಚಿ ಮೇಲೆ ಕುಳಿತಿದ್ದ ಕೋಚ್ ರವಿಶಾಸ್ತ್ರಿ ಕೂತಲ್ಲೇ ನಿದ್ರೆಗೆ ಜಾರಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಫೋಟೋ ನೋಡಿದ ಟ್ವಿಟರಿಗರು, ಈ ರೀತಿ ಮಲಗಿ ನಿದ್ರೆ ಮಾಡಲು ಶಾಸ್ತ್ರಿಗೆ 10 ಕೋಟಿ ರೂ. ಸಂಭಾವನೆ